ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ ( ) ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ. ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು. ಈ ಪ್ರಕ್ರಿಯೆ ಎಲ್ಲಾ ಸ್ನಾತಕೋತ್ತರ ಮಟ್ಟದ ಪದವಿಗಳಿಗೂ ಅನ್ವಯಿಸುತ್ತದೆ. ಇದು ಅತ್ಯತ್ತಮ ಅಭಿಯಂತ್ರ ಪದವಿಯನ್ನು ನೀಡುತ್ತದೆ.ಭಾರತದಲ್ಲಿ ೨೩ ಐಐಟಿಗಳಿವೆ. ಆವುಗಳಲ್ಲಿ ಮುಖ್ಯವಾದವು ಖರಗ್ಪುರ, ಮುಂಬಯಿ, ಮದ್ರಾಸ್, ಕಾನ್ಪುರ್, ದೆಹಲಿ, ಧನ್ಬಾದ್, ರೂರ್ಕಿ, ವಾರಾಣಸಿ, ಗೌಹಾತಿಗಳಲ್ಲಿ ಇದೆ.